ಬೈಕ್ ಬಳಿ ನಿಂತಿದ್ದ ವ್ಯಕ್ತಿಗೆ ಬಸ್ ಡಿಕ್ಕಿ: ಸಾವು ಶುಕ್ರವಾರ ರಾತ್ರಿ 9.45 ರ ಸುಮಾರಿಗೆ ಹಳೆ ಮದ್ರಾಸ್ ರಸ್ತೆಯ ಐಟಿಐ ಜಂಕ್ಷನ್‌ನಲ್ಲಿ ಸುಪ್ರೀತ್ ಬೈಕ್ ನಿಲ್ಲಿಸಿ ನಿಂತಿದ್ದರು. ಈ ವೇಳೆ ಕೆಆರ್ ಪುರಂ ಕಡೆಗೆ ವೇಗವಾಗಿ ಬಂದ ಬಿಎಂಟಿಸಿ ಬಸ್ (ಕೆಎ-57-ಎಫ್-1388) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಬೆಂಗಳೂರು: ವೇಗವಾಗಿ ಬಂದ ಬಿಎಂಟಿಸಿ ವೋಲ್ವೋ ಬಸ್ ವೊಂದು ಬೈಕ್ ಬಳಿ ನಿಂತಿದ್ದ ಸವಾರನಿಗೆ ಡಿಕ್ಕಿ ಹೊಂಡ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ಹಳೇ ಮದ್ರಾಸ್ ರಸ್ತೆ ಐಟಿಐ ಜಂಕ್ಷನ್ ನಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ಮೈಸೂರು ಮೂಲದ ಕೆಆರ್ ಪುರಂನ ನಿಸರ್ಗ ಲೇಔಟ್ ನಿವಾಸಿ ಸುಪ್ರೀತ್ ಜೆಎನ್ (33) ಎಂದು ಗುರುತಿಸಲಾಗಿದೆ. ಕೆಆರ್ ಪುರಂ ಸಂಚಾರ ಪೊಲೀಸರು ಬಲ್ ಚಾಲಕನನ್ನು ಬಂಧಿಸಿ ಬಸ್ ವಶಪಡಿಸಿಕೊಂಡಿದ್ದಾರೆ.ಶುಕ್ರವಾರ ರಾತ್ರಿ 9.45 ರ ಸುಮಾರಿಗೆ ಹಳೆ ಮದ್ರಾಸ್ ರಸ್ತೆಯ ಐಟಿಐ ಜಂಕ್ಷನ್‌ನಲ್ಲಿ ಸುಪ್ರೀತ್ ಬೈಕ್ ನಿಲ್ಲಿಸಿ ನಿಂತಿದ್ದರು. ಈ ವೇಳೆ ಕೆಆರ್ ಪುರಂ ಕಡೆಗೆ ವೇಗವಾಗಿ ಬಂದ ಬಿಎಂಟಿಸಿ ಬಸ್ (ಕೆಎ-57-ಎಫ್-1388) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸುಪ್ರೀತ್ ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದು, ಬಸ್ ಚಾಲಕ ಹಾಗೂ ಬಸ್ ನ್ನು ವಶಕ್ಕೆ ಪಡೆದಿದ್ದಾರೆ.ಘಟನೆಯಲ್ಲಿ ಬಿಎಂಟಿಸಿ ಬಸ್, ಬುಲೆಟ್ ದ್ವಿಚಕ್ರ ವಾಹನ, ಟ್ಯಾಂಕರ್ ವಾಹನ ಹಾಗೂ ಕಾಂಕ್ರೆಟ್ ವಾಹನ ಜಖಂಗೊಂಡಿವೆ. ಈ ಸಂಬಂಧ ಕೆ.ಆರ್.ಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುುವರೆಸಿದ್ದಾರೆ.